Telegram Join My Telegram WhatsApp Join My WhatsApp

📌 ECHS Recruitment 2026 – ಸಂಪೂರ್ಣ ಮಾಹಿತಿ

ECHS Recruitment 2026 ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS) ಬೆಂಗಳೂರು ವಲಯದ ವಿವಿಧ ಪಾಲಿಕ್ಲಿನಿಕ್‌ಗಳಲ್ಲಿ ನೇಮಕಾತಿಗೆ ಖಾಲಿ  ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಈ ನೇಮಕಾತಿ ಪ್ರಕ್ರಿಯೆಯು ಒಟ್ಟು 39 ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ವೈದ್ಯಕೀಯೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಮಡಿಕೇರಿ, ಮಂಗಳೂರು, ಶಿವಮೊಗ್ಗ, ವಿರಾಜಪೇಟೆ ಹಾಗೂ ಬೆಂಗಳೂರು ಭಾಗಗಳಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿ ಮಾರ್ಪಾಡಾಗಿದೆ.

ಇದರಲ್ಲಿ ವಿಶೇಷವಾಗಿ ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಸೇವೆ ಸಲ್ಲಿಸುವ ಗೌರವಯುತವಾದ ಉದ್ಯೋಗವಾಗಿರುತ್ತದೆ.ಈ ಉದ್ಯೋಗವು ಅಭ್ಯರ್ಥಿಗಳ ಭವಿಷ್ಯವನ್ನು ಭದ್ರಗೊಳಿಸುವುದಲ್ಲದೆ ಸಮಾಜದಲ್ಲಿ ಉತ್ತಮ ಗೌರವವನ್ನು ತ೦ಡುಕೊಡುತ್ತದೆ.

👉 ಸರ್ಕಾರಿ ಉದ್ಯೋಗಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ನಮ್ಮ Jobs ವಿಭಾಗವನ್ನು ಪರಿಶೀಲಿಸಿ.


📍ECHS Recruitment 2026: ನೇಮಕಾತಿಯ ವಿವರಗಳು

ವಿವರ ಮಾಹಿತಿ
ನೇಮಕಾತಿ ಸಂಸ್ಥೆ ECHS ಬೆಂಗಳೂರು ಕೇಂದ್ರ
ಒಟ್ಟು ಹುದ್ದೆಗಳು 39
ಉದ್ಯೋಗ ಸ್ಥಳ ಬೆಂಗಳೂರು, ಮಡಿಕೇರಿ, ಮಂಗಳೂರು, ಶಿವಮೊಗ್ಗ, ವಿರಾಜಪೇಟೆ
ಅರ್ಜಿ ವಿಧಾನ ಆಫ್‌ಲೈನ್ ಮೂಲಕ
ಕೊನೆಯ ದಿನಾಂಕ 16 ಫೆಬ್ರವರಿ 2026

🏥ECHS Recruitment 2026: ಹುದ್ದೆಗಳ ಮಾಹಿತಿ

ECHS Recruitment 2026 ಅಡಿಯಲ್ಲಿ ಲಭ್ಯವಿರುವ ಹುದ್ದೆಗಳು:

  • ವೈದ್ಯಕೀಯ ತಜ್ಞರು – 2

  • ವೈದ್ಯಕೀಯ ಅಧಿಕಾರಿಗಳು – 5

  • ದಂತ ವೈದ್ಯಕೀಯ ಅಧಿಕಾರಿಗಳು – 4

  • ಔಷಧ ವಿತರಕರು (Pharmacist) – 3

  • ಪ್ರಯೋಗಾಲಯ ತಂತ್ರಜ್ಞರು – 2

  • ನರ್ಸಿಂಗ್ ಸಹಾಯಕರು – 3

  • ದಂತ ನೈರ್ಮಲ್ಯ ತಜ್ಞರು – 5

  • ಕ್ಲರ್ಕ್/ಗುಮಾಸ್ತರು – 2

  • ಚಾಲಕರು – 3

  • ಕಾವಲುಗಾರರು – 2

  • ಪಿಯೋನ್/ಸೇವಕರು – 2

  • ಹೌಸ್ ಕೀಪರ್/ಸ್ವಚ್ಛತಾ ಸಿಬ್ಬಂದಿ – 2

  • ಮಹಿಳಾ ಸಹಾಯಕಿಯರು – 1

  • DSC – 2


🎓ECHS Recruitment 2026: ವಿದ್ಯಾರ್ಹತೆ

ಪ್ರತಿ ಹುದ್ದೆಗೆ ವಿಭಿನ್ನ ಅರ್ಹತೆ ನಿಗದಿಯಾಗಿದೆ:

  • ವೈದ್ಯಕೀಯ ತಜ್ಞರು: MD/MS + ಕನಿಷ್ಠ 3 ವರ್ಷ ಅನುಭವ

  • ವೈದ್ಯಕೀಯ ಅಧಿಕಾರಿ: MBBS + 3 ವರ್ಷ ಅನುಭವ

  • ದಂತ ವೈದ್ಯಕೀಯ ಅಧಿಕಾರಿ: BDS + 3 ವರ್ಷ ಅನುಭವ

  • Pharmacist: B.Pharm/D.Pharm + ನೋಂದಣಿ ಅಗತ್ಯ

  • Lab Technician: BSc (MLT)/DMLT

  • Nursing Assistant: GNM ಅಥವಾ ಸೇನಾ ಅನುಭವ + 6 ವರ್ಷ ಅನುಭವ

  • Clerk: ಪದವಿ + ಕಂಪ್ಯೂಟರ್ ಜ್ಞಾನ + 5 ವರ್ಷ ಅನುಭವ

  • Driver: 8ನೇ ತರಗತಿ + Driving License + 5 ವರ್ಷ ಅನುಭವ

  • ಇತರೆ ಸಿಬ್ಬಂದಿಗೆ ಕನಿಷ್ಠ ಸಾಕ್ಷರತೆ ಮತ್ತು ಅನುಭವ ಬೇಕು.


🎂ECHS Recruitment 2026: ವಯೋಮಿತಿ

ಹುದ್ದೆಗಳ ಪ್ರಕಾರ ಗರಿಷ್ಠ ವಯೋಮಿತಿ:

  • ವೈದ್ಯಕೀಯ ತಜ್ಞರು – 68 ವರ್ಷ

  • ವೈದ್ಯಕೀಯ ಅಧಿಕಾರಿ – 66 ವರ್ಷ

  • ದಂತ ಅಧಿಕಾರಿ/DSC – 63 ವರ್ಷ

  • Pharmacist/Nursing Assistant – 56 ವರ್ಷ

  • ಮಹಿಳಾ ಸಹಾಯಕಿಯರು – 53 ವರ್ಷ

ಮಾಜಿ ಸೈನಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.


💰ECHS Recruitment 2026: ಸ೦ಬಳದ ವಿವರ

ಹುದ್ದೆ ಮಾಸಿಕ ವೇತನ (ರೂ.)
ವೈದ್ಯಕೀಯ ತಜ್ಞರು 1,30,000
ವೈದ್ಯಕೀಯ ಅಧಿಕಾರಿ/ದಂತ ಅಧಿಕಾರಿ/DSC 95,000
Pharmacist/Lab Tech/Nursing Assistant 36,500
Clerk 29,200
Driver 25,600
Peon/Chowkidar/Housekeeper 21,800

💳ECHS Recruitment 2026: ಅರ್ಜಿ ಶುಲ್ಕ ಎಷ್ಟು?

ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಉಚಿತವಾಗಿ ಅರ್ಜಿ ಸಲ್ಲಿಸಬಹುದು.


📝 ಅರ್ಜಿ ಸಲ್ಲಿಸುವ ಹ೦ತಗಳು (Offline Apply)

ಅಭ್ಯರ್ಥಿಗಳು ಈ ಹಂತಗಳನ್ನು ಅನುಸರಿಸಬೇಕು:

  1. ECHS ಅಧಿಕೃತ ವೆಬ್‌ಸೈಟ್ www.echs.gov.in ಗೆ ಭೇಟಿ ನೀಡಿ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ

  2. ಅರ್ಜಿಯಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿ

  3. ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ

  4. ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ:

Officer In Charge,
ECHS Cell, Station Cell,
Cubbon Road, Bengaluru – 560001

  1. ಅರ್ಜಿ ಕೊನೆಯ ದಿನಾಂಕ:

📌 16 ಫೆಬ್ರವರಿ 2026 ಮಧ್ಯಾಹ್ನ 2:00 ಗಂಟೆಯೊಳಗೆ ತಲುಪಬೇಕು.


🎯ECHS Recruitment 2026: ಆಯ್ಕೆಯ ಹ೦ತಗಳು

  • ಅರ್ಜಿಗಳ ಪರಿಶೀಲನೆ (Qualification + Experience ಆಧಾರಿತ)

  • ಶಾರ್ಟ್‌ಲಿಸ್ಟ್ ಆದವರಿಗೆ ಮಾತ್ರ ಸಂದರ್ಶನ

  • ಸಂದರ್ಶನ: ಫೆಬ್ರವರಿ 2026 ನಾಲ್ಕನೇ ವಾರದಲ್ಲಿ ನಡೆಯುವ ಸಾಧ್ಯತೆ.

ಸಂದರ್ಶನಕ್ಕೆ ಮೂಲ ದಾಖಲೆಗಳು ಕಡ್ಡಾಯ.


📅ECHS Recruitment 2026: ನೆನಪಿಟ್ಟುಕೊಳ್ಳಬೇಕಾದ ದಿನಾಂಕಗಳು

ಕಾರ್ಯಕ್ರಮ ದಿನಾಂಕ
ಅರ್ಜಿ ಕೊನೆಯ ದಿನ 16 ಫೆಬ್ರವರಿ 2026
ಸಂದರ್ಶನ ಸಮಯ ಫೆಬ್ರವರಿ 2026 – 4ನೇ ವಾರ
ಸಮಯ 09:00 AM – 03:00 PM

📞 ಹೆಚ್ಚಿನ ವಿವರಗಳಿಗಾಗಿ

ಸಹಾಯವಾಣಿ: 080-25322873

👉 ಹೊಸ ಯೋಜನೆಗಳು ಮತ್ತು ವಿದ್ಯಾರ್ಥಿಗಳಿಗೆ ಇರುವ ಸೌಲಭ್ಯಗಳ ಕುರಿತು ತಿಳಿಯಲು ನಮ್ಮ Schemes ವಿಭಾಗವನ್ನು ನೋಡಿ.


⭐ ECHS Recruitment 2026 ಯಾಕೆ ಉತ್ತಮ?

ECHS (Ex-Servicemen Contributory Health Scheme) ನೇಮಕಾತಿ ಪ್ರಕ್ರಿಯೆ ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಅತ್ಯಂತ ವಿಶ್ವಾಸಾರ್ಹ ಉದ್ಯೋಗ ಅವಕಾಶಗಳಲ್ಲಿ ಒಂದಾಗಿದೆ. ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಕಾರ್ಯನಿರ್ವಹಿಸುತ್ತದೆ.

ಈ ಕಾರಣಕ್ಕಾಗಿ ಇಲ್ಲಿ ಕೆಲಸ ಮಾಡುವುದರಿಂದ ಅಭ್ಯರ್ಥಿಗಳಿಗೆ ಕೇವಲ ಉದ್ಯೋಗ ಮಾತ್ರವಲ್ಲದೆ, ಸಮಾಜ ಸೇವೆಯ ಗೌರವವೂ ದೊರೆಯುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವವರು, ಫಾರ್ಮಾಸಿಸ್ಟ್‌ಗಳು, ಲ್ಯಾಬ್ ಸಿಬ್ಬಂದಿ ಹಾಗೂ ಕ್ಲರ್ಕ್ ಹುದ್ದೆ ಹುಡುಕುತ್ತಿರುವವರಿಗೆ ಇದು ಬಹಳ ಉಪಯುಕ್ತವಾಗಿದೆ.


🏥 ಕೆಲಸದ ವಾತಾವರಣ ಮತ್ತು ಅನುಕೂಲಗಳು

ECHS ಪಾಲಿಕ್ಲಿನಿಕ್‌ಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಕೆಲಸದ ವಾತಾವರಣ ಸಿಗುತ್ತದೆ. ರಕ್ಷಣಾ ಸಚಿವಾಲಯದ ನಿಯಮಾವಳಿಗಳ ಪ್ರಕಾರ ಗೌರವಧನ ನೀಡಲಾಗುವುದರಿಂದ ಉದ್ಯೋಗ ಭದ್ರತೆ ಮತ್ತು ಸಮಯಕ್ಕೆ ಸರಿಯಾಗಿ ವೇತನ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಅದರ ಜೊತೆಗೆ ಅಭ್ಯರ್ಥಿಗಳಿಗೆ ಶಿಸ್ತಿನ ಕೆಲಸದ ಅನುಭವ, ಸರ್ಕಾರಿ ವ್ಯವಸ್ಥೆಯಲ್ಲಿನ ಕಾರ್ಯ ನಿರ್ವಹಣೆ ಹಾಗೂ ಆರೋಗ್ಯ ಕ್ಷೇತ್ರದ ವೃತ್ತಿಪರ ಬೆಳವಣಿಗೆಗೆ ಉತ್ತಮ ಅವಕಾಶ ಸಿಗುತ್ತದೆ.


📌 ಅಭ್ಯರ್ಥಿಗಳು ಗಮನಿಸಬೇಕಾದ ಮುಖ್ಯಾ೦ಶಗಳು

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಅತ್ಯಂತ ಮುಖ್ಯ. ತಪ್ಪಾದ ಮಾಹಿತಿಯನ್ನು ನೀಡಿದರೆ ಅಥವಾ ದಾಖಲೆಗಳ ಕೊರತೆ ಇದ್ದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ.

ಅರ್ಜಿಯನ್ನು ಕಳುಹಿಸುವಾಗ ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸರಿಯಾಗಿ ಲಗತ್ತಿಸಬೇಕು. ಜೊತೆಗೆ ಕೊನೆಯ ದಿನಾಂಕದ ಮೊದಲು ಅರ್ಜಿ ತಲುಪುವಂತೆ ನೋಡಿಕೊಳ್ಳಬೇಕು.


🎯 ಮಾಜಿ ಸೈನಿಕರಿಗೆ ಪ್ರಾಮುಖ್ಯತೆಗಳು

ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ ಮಾಜಿ ಸೈನಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮಾಜಿ ಸೈನಿಕರು ಲಭ್ಯವಿಲ್ಲದ ಸಂದರ್ಭದಲ್ಲಿ ಮಾತ್ರ ನಾಗರಿಕ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.

ಹೀಗಾಗಿ ಮಾಜಿ ಸೈನಿಕ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ತಕ್ಷಣ ಅರ್ಜಿ ಸಲ್ಲಿಸುವುದು ಉತ್ತಮ.


❓ECHS Recruitment 2026: ಪ್ರಶ್ನೋತ್ತರಗಳು

1. ECHS Recruitment 2026 ಅಡಿಯಲ್ಲಿ ಎಷ್ಟು ಹುದ್ದೆಗಳ ಸ೦ಖೆ?

ECHS ಬೆಂಗಳೂರು ವಲಯದ ಪಾಲಿಕ್ಲಿನಿಕ್‌ಗಳಲ್ಲಿ ಒಟ್ಟು 39 ವಿವಿಧ ವೈದ್ಯಕೀಯ ಹಾಗೂ ವೈದ್ಯಕೀಯೇತರ ಹುದ್ದೆಗಳು ಲಭ್ಯವಿವೆ.


2. ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಹ೦ತಗಳು ಯಾವುವು?

ಈ ನೇಮಕಾತಿಗೆ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿ ಸಲ್ಲಿಸಬಹುದು.


3. ಅರ್ಜಿ ಸಲ್ಲಿಸಲು ಅ೦ತಿಮ ದಿನಾಂಕ ಯಾವುದು?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

📌 16 ಫೆಬ್ರವರಿ 2026 (ಮಧ್ಯಾಹ್ನ 2:00 ಗಂಟೆಯೊಳಗೆ)

ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.


4. ನಾಗರಿಕ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದೇ?

ಹೌದು, ನಾಗರಿಕ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಆದರೆ ಮಾಜಿ ಸೈನಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮಾಜಿ ಸೈನಿಕರು ಲಭ್ಯವಿಲ್ಲದ ಸಂದರ್ಭದಲ್ಲಿ ಮಾತ್ರ ನಾಗರಿಕರನ್ನು ಪರಿಗಣಿಸಲಾಗುತ್ತದೆ.


5. ಈ ಹುದ್ದೆಗಳು ಶಾಶ್ವತವೇ ಅಥವಾ ಗುತ್ತಿಗೆ ಆಧಾರಿತವಾಗಿವೆಯೇ?

ಈ ನೇಮಕಾತಿಯ ಹುದ್ದೆಗಳು ಪ್ರಾರಂಭದಲ್ಲಿ ಒಂದು ವರ್ಷದ ಗುತ್ತಿಗೆ ಆಧಾರಿತ ನೇಮಕಾತಿ ಆಗಿರುತ್ತದೆ. ಕಾರ್ಯಕ್ಷಮತೆಯ ಆಧಾರದಲ್ಲಿ ಅವಧಿ ವಿಸ್ತರಣೆ ಸಾಧ್ಯತೆ ಇದೆ.


6. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇವೆಯೇ?

ಇಲ್ಲ, ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.


7. ಆಯ್ಕೆ ಪ್ರಕ್ರಿಯೆ ನಡೆಯುವ ಬಗೆ ಹೇಗೆ?

ಆಯ್ಕೆ ಪ್ರಕ್ರಿಯೆ ಈ ರೀತಿಯಾಗಿದೆ:

  • ಅರ್ಜಿಗಳ ಪರಿಶೀಲನೆ

  • ಶಾರ್ಟ್‌ಲಿಸ್ಟ್ ಅಭ್ಯರ್ಥಿಗಳಿಗೆ ಸಂದರ್ಶನ

  • ಅಂತಿಮ ಆಯ್ಕೆ ಅನುಭವ ಮತ್ತು ಅರ್ಹತೆಯ ಆಧಾರದಲ್ಲಿ


8. ಸಂದರ್ಶನ ಯಾವಾಗ ನಡೆಯಬಹುದು?

ಸಂದರ್ಶನವು ಸಾಮಾನ್ಯವಾಗಿ:

📌 ಫೆಬ್ರವರಿ 2026 ರ ನಾಲ್ಕನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.


9. ಸಂದರ್ಶನಕ್ಕೆ ಹೋಗುವಾಗ ಪ್ರಯಾಣ ಭತ್ಯೆ ಕೊಡುತ್ತಾರೆಯೇ?

ಇಲ್ಲ, ಅಭ್ಯರ್ಥಿಗಳಿಗೆ ಸಂದರ್ಶನ ಅಥವಾ ಪರೀಕ್ಷೆಗೆ ಹಾಜರಾಗಲು ಯಾವುದೇ TA/DA (ಪ್ರಯಾಣ ಭತ್ಯೆ) ನೀಡಲಾಗುವುದಿಲ್ಲ.


10. ಅರ್ಜಿ ಹಾಕಲು ಅಗತ್ಯ ದಾಖಲೆಗಳು ಯಾವುವು?

ಅಭ್ಯರ್ಥಿಗಳು ಈ ದಾಖಲೆಗಳನ್ನು ಲಗತ್ತಿಸಬೇಕು:

  • ಶೈಕ್ಷಣಿಕ ಪ್ರಮಾಣಪತ್ರಗಳು

  • ಅನುಭವ ಪತ್ರಗಳು

  • ಆಧಾರ್ ಕಾರ್ಡ್

  • ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋ

  • ಮಾಜಿ ಸೈನಿಕರಾದರೆ ಡಿಸ್ಚಾರ್ಜ್ ಬುಕ್ ಮತ್ತು PPO


11. ಅರ್ಜಿ ಸಲ್ಲಿಸುವ ಸರಿಯಾದ ವಿಳಾಸ ಯಾವುದು?

ಭರ್ತಿ ಮಾಡಿದ ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಬೇಕು:

Officer In Charge,
ECHS Cell, Station Cell,
Cubbon Road, Bengaluru – 560001


12. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಮಾಡುವ ಸಂಖ್ಯೆ ಏನು?

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

📞 080-25322873


✅ Conclusion

ECHS Recruitment 2026 ಮೂಲಕ ರಕ್ಷಣಾ ಇಲಾಖೆಯ ಅಧೀನದಲ್ಲಿ ಗೌರವಾನ್ವಿತ ಸೇವೆ ಸಲ್ಲಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ ಈ ಉದ್ಯೋಗ ಅವಕಾಶವನ್ನು ಬಳಸಿಕೊಳ್ಳಿ.

ಒಟ್ಟಾರೆ, Ex-Servicemen Contributory Health Scheme (ECHS) Recruitment 2026 ಉದ್ಯೋಗ ನೋಡುತ್ತಿರುವವರಿಗೆ, ವಿಶೇಷವಾಗಿ ಮಾಜಿ ಸೈನಿಕರು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚೆ ಇರುವವರಿಗೆ, ಅಪರೂಪದ ಹಾಗು ಉತ್ತಮ ಅವಕಾಶವಾಗಿದೆ.

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಯೋಜನೆ ವಿಶ್ವಾಸಾರ್ಹತೆ ಮತ್ತು ಸ್ಥಿರತೆಯ ಸಂಕೇತವಾಗಿದ್ದು, ಇಲ್ಲಿ ಉದ್ಯೋಗ ಮಾಡುವುದರಿಂದ ಅಭ್ಯರ್ಥಿಗಳಿಗೆ ಉತ್ತಮ ಗೌರವ ಮತ್ತು ಭದ್ರ ಭವಿಷ್ಯ ಸಿಗುತ್ತದೆ.

ಈ ನೇಮಕಾತಿಯಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ವೈದ್ಯಕೀಯೇತರ ಹುದ್ದೆಗಳು ಲಭ್ಯವಿರುವುದರಿಂದ ವಿವಿಧ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಸಿಗುತ್ತದೆ. ಹೆಚ್ಚಾಗಿ ಯಾವುದೇ ಅರ್ಜಿ ಶುಲ್ಕವಿಲ್ಲದೆ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ, ಅನುಭವ ಮತ್ತು ಅರ್ಹತೆ ಆಧಾರಿತ ಆಯ್ಕೆ ಪ್ರಕ್ರಿಯೆ ಇರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯಯುತ ಅವಕಾಶ ಸಿಗುತ್ತದೆ.

ಮತ್ತೊಂದು ಮುಖ್ಯ ಅಂಶವೆಂದರೆ, ಈ ಉದ್ಯೋಗವು ಕೇವಲ ಹಣಕಾಸಿನ ಭದ್ರತೆ ಮಾತ್ರವಲ್ಲದೆ, ಸಮಾಜ ಸೇವೆಯ ಮಹತ್ವವನ್ನು ಕೂಡ ಒಳಗೊಂಡಿದೆ.

ಮಾಜಿ ಸೈನಿಕರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಸೇವೆ ಒದಗಿಸುವ ಮೂಲಕ, ದೇಶ ಸೇವೆಯ ಒಂದು ಭಾಗವಾಗುವ ಉತ್ತಮ ಅವಕಾಶ ಅಭ್ಯರ್ಥಿಗಳಿಗೆ ಸಿಗುತ್ತದೆ. ಇದು ಸಾಮಾನ್ಯ ಉದ್ಯೋಗಕ್ಕಿಂತ ಹೆಚ್ಚಿನ ತೃಪ್ತಿಯನ್ನು ಹಾಗು ಸ೦ತೋಷವನ್ನು ನೀಡುತ್ತದೆ.

ಆದ್ದರಿಂದ, ಆಸಕ್ತ ಅಭ್ಯರ್ಥಿಗಳು ಯಾವುದೇ  ರೀತಿ ತಡ ಮಾಡದೆ ಅಧಿಕೃತ ಸೂಚನೆಯನ್ನು ಗಮನವಿಟ್ಟು ಸಂಪೂರ್ಣವಾಗಿ ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಅ೦ತಿಮ ದಿನಾಂಕದೊಳಗೆ ಅರ್ಜಿ ಹಾಕುವುದು ಅತೀ ಮುಖ್ಯ. ಕೊನೆಯ ಕ್ಷಣದಲ್ಲಿ ತೊಂದರೆ ಎದುರಾಗದಂತೆ ಎಚ್ಚರವಹಿಸಿ ಮುಂಚಿತವಾಗಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುವುದು ಒಳ್ಳೆಯದು.

👉 NEET ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್‌ಡೇಟ್‌ಗಳಿಗಾಗಿ ನಮ್ಮ ವೆಬ್‌ಸೈಟ್‌ನ್ನು ಫಾಲೋ ಮಾಡಿ.

✍️ ಲೇಖಕರ ಬಗ್ಗೆ

ಚಿದಾನಂದ ಅವರು Dinabelaku News ವೆಬ್‌ಸೈಟ್‌ನ ವಿಷಯ ರಚನೆಕಾರರಾಗಿದ್ದು,
ಓದುಗರಿಗೆ ನವೀನ ಸರ್ಕಾರಿ ಉದ್ಯೋಗ ಮಾಹಿತಿ, ಶಿಕ್ಷಣ, ಹಾಗೂ ಉಪಯುಕ್ತ ಸುದ್ದಿಗಳನ್ನು ಕನ್ನಡದಲ್ಲಿ ಸರಳವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವುದು ಇವರ ಮುಖ್ಯ ಉದ್ದೇಶವಾಗಿದ್ದು,
ಓದುಗರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರ ಭವಿಷ್ಯವನ್ನು ಬೆಳಗಿಸುವ ಕನಸನ್ನು ಹೊಂದಿದ್ದಾರೆ.

📢 Dinabelaku News – ನಿಮ್ಮ ವಿಶ್ವಾಸದ ಮಾಹಿತಿ ಮೂಲ

Leave a Comment