Why are you leaving your job? Interviewನಲ್ಲಿ ಹೇಳಬಹುದಾದ 4 ಉತ್ತಮ ಕಾರಣಗಳು ಮತ್ತು ತಪ್ಪಿಸಬೇಕಾದ 5 ಪ್ರಮುಖ ಉತ್ತರಗಳು
ಉದ್ಯೋಗ ಸಂದರ್ಶನಕ್ಕೆ ಹೋದಾಗ ಅಭ್ಯರ್ಥಿಗಳಿಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಮುಖ ಪ್ರಶ್ನೆಗಳಲ್ಲಿ ಒಂದು:
“ನೀವು ಈಗಿರುವ ಉದ್ಯೋಗವನ್ನು ಏತಕ್ಕಾಗಿ ಬದಲಾಯಿಸಲು ಬಯಸುತ್ತೀರಿ?”
ಅಥವಾ,
“Why are you leaving your current job?”
“Why are you looking for a new opportunity?”
“What is the reason for your job change?”
ಪ್ರಶ್ನೆಯ ಪದಗಳು ಬದಲಾಗಬಹುದು. ಆದರೆ interviewer ತಿಳಿದುಕೊಳ್ಳಲು ಬಯಸುವ ಮುಖ್ಯ ವಿಷಯ ಬಹುತೇಕ ಒಂದೇ ಆಗಿರುತ್ತದೆ.
ನೀವು ಈಗಿರುವ ಸಂಸ್ಥೆಯನ್ನು ಏಕೆ ತೊರೆಯಲು ಬಯಸುತ್ತಿದ್ದೀರಿ? ಹೊಸ ಉದ್ಯೋಗದಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ? ನಿಮ್ಮ career goal ಏನು? ನೀವು ಹೊಸ ಕಂಪನಿಗೆ ಎಷ್ಟು ಸಮಯದವರೆಗೆ commitment ಗಳನ್ನು ಕೊಡಬಹುದು? ನೀವು ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಉದ್ಯೋಗ ಬದಲಾಯಿಸುತ್ತಿದ್ದೀರಾ ಅಥವಾ ನಿಜವಾಗಿಯು ಕೂಡ career growthಗಾಗಿ ಹೊಸ ಅವಕಾಶ ಹುಡುಕುತ್ತಿದ್ದೀರಾ?
ಈ ಒಂದು ಪ್ರಶ್ನೆಗೆ ನೀವು ಕೊಡುವ ಉತ್ತರದಿಂದ interviewer ನಿಮ್ಮ professional maturity, career planning, attitude ಮತ್ತು future goals ಬಗ್ಗೆ ಸಾಕಷ್ಟು ಅರ್ಥಮಾಡಿಕೊಳ್ಳಬಹುದು.
ಅದರಲ್ಲೂ ಪ್ರಮುಖವಾಗಿ, ನಿಮ್ಮ ಉತ್ತರದಲ್ಲಿ ಹಿಂದಿನ ಕಂಪನಿ ಅಥವಾ manager ಬಗ್ಗೆ ಕೆಟ್ಟದಾಗಿ ಹೇಳುವುದು, salary ಒಂದನ್ನೇ ಕಾರಣವಾಗಿ ಹೇಳುವುದು ಅಥವಾ ತುಂಬಾ ವೈಯಕ್ತಿಕ ವಿಷಯಗಳನ್ನು ಇಲ್ಲಿ ವಿವರಿಸುವುದು ನಿಮ್ಮ ಮೇಲೆ negative impression ಮೂಡಿಸಬಹುದು.
ಹಾಗಾದರೆ ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ?
ಈ ಲೇಖನದಲ್ಲಿ ಉದ್ಯೋಗ ಬದಲಾವಣೆಯ ಕಾರಣವನ್ನು ಕೇಳಿದಾಗ ಹೇಳಬಹುದಾದ 4 ಉತ್ತಮ ಕಾರಣಗಳು, ತಪ್ಪಿಸಬೇಕಾದ 5 ಸಾಮಾನ್ಯ ಉತ್ತರಗಳು, ಮತ್ತು ನಿಮ್ಮ ಉತ್ತರವನ್ನು professional ಆಗಿ ರೂಪಿಸುವ ಸರಳ ವಿಧಾನವನ್ನು ತಿಳಿಯೋಣ.
👉 ನಿಮ್ಮ ಕನಸಿನ ಸರ್ಕಾರಿ ಉದ್ಯೋಗ ಪಡೆಯಲು step-by-step ಮಾರ್ಗದರ್ಶನಕ್ಕಾಗಿ Job Guide ಓದಿ.
🔎 Interviewer ಮುಖ್ಯವಾಗಿ ಈ ಪ್ರಶ್ನೆಯನ್ನು ಏಕೆ ಕೇಳುತ್ತಾರೆ?
ಮೊದಲಿಗೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು.
Interviewer ಈ ಪ್ರಶ್ನೆಯನ್ನು ಕೇವಲ ಮಾತುಕತೆಗಾಗಿ ಕೇಳುವುದಿಲ್ಲ.
ಅವರು ನಿಮ್ಮ ಉತ್ತರದ ಮೂಲಕ ಹಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.
✨ ನಿಮ್ಮ career direction ಏನು?
✨ ನೀವು ಹೊಸ role ಬಗ್ಗೆ ನಿಜವಾಗಿಯೂ ಆಸಕ್ತಿ ಹೊಂದಿದ್ದೀರಾ?
✨ ನಿಮ್ಮ skills ಮತ್ತು ಹೊಸ job ನಡುವೆ ಹೊಂದಾಣಿಕೆ ಇದೆಯೇ?
✨ ನೀವು ಹಿಂದಿನ ಸಂಸ್ಥೆಯಿಂದ ಯಾವುದಾದರೂ ಸಮಸ್ಯೆಯಿಂದ ಹೊರಬರುತ್ತಿದ್ದೀರಾ?
✨ ಮತ್ತೆ ಕೆಲವು ತಿಂಗಳುಗಳಲ್ಲಿ job ಬದಲಾಯಿಸುವ ಸಾಧ್ಯತೆ ಇದೆಯೇ?
✨ ನಿಮ್ಮ expectations ಮತ್ತು ಕಂಪನಿಯ ಅವಕಾಶಗಳು ಒಂದಕ್ಕೊಂದು ಹೊಂದಿಕೆಯಾಗುತ್ತವೆಯೇ?
ಉದಾಹರಣೆಗೆ, ಒಬ್ಬ ಅಭ್ಯರ್ಥಿ:
“ನನ್ನ boss ತುಂಬಾ ಕೆಟ್ಟವರು. ಅದಕ್ಕಾಗಿಯೇ ಕೆಲಸ ಬಿಡುತ್ತಿದ್ದೇನೆ.”
ಎಂದು ಹೇಳಿದರೆ, interviewerಗೆ ಅದು ಕೇವಲ ಹಿಂದಿನ manager ಬಗ್ಗೆ negative statement ಆಗಿ ಕಾಣುವುದಿಲ್ಲ.
ಅವರು ಹೀಗೆ ಯೋಚಿಸಬಹುದು:
“ಮುಂದೆ ನಮ್ಮ ಸಂಸ್ಥೆಯಲ್ಲಿ ಯಾವುದಾದರೂ disagreement ಬಂದರೆ ಈ ಅಭ್ಯರ್ಥಿ ನಮ್ಮ ಬಗ್ಗೆ ಕೂಡ ಇದೇ ರೀತಿಯಾಗಿ ಮಾತನಾಡಬಹುದೇ?”
ಅದೇ ಕಾರಣಕ್ಕೆ, ನಿಮ್ಮ ನಿಜವಾದ ಸಮಸ್ಯೆ ಏನೇ ಇದ್ದರೂ ಅದನ್ನು professional ಮತ್ತು positive framingನಲ್ಲಿ ಹೇಳುವುದು ಮುಖ್ಯ.
🌱 ಉತ್ತಮ ಕಾರಣ 1: ಈಗಿನ Roleನಲ್ಲಿ Growthಗೆ ಅವಕಾಶ ತುಂಬಾ ಕಡಿಮೆಯಾಗಿದೆ
ಉದ್ಯೋಗ ಬದಲಾಯಿಸಲು ಅತ್ಯಂತ ಸ್ವಾಭಾವಿಕ ಮತ್ತು professional ಕಾರಣಗಳಲ್ಲಿ ಇದು ಒಂದು.
ಒಬ್ಬ ವ್ಯಕ್ತಿ ಒಂದೇ roleನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ ಎಂದುಕೊಳ್ಳಿ.
ಅವನು ತನ್ನ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾನೆ. ಹೊಸ skills ಕಲಿತಿದ್ದಾನೆ. ಆದರೆ ಮುಂದಿನ ಹಂತಕ್ಕೆ ಹೋಗಲು ಸಂಸ್ಥೆಯಲ್ಲಿ ಸದ್ಯಕ್ಕೆ ಯಾವುದೇ ಸ್ಪಷ್ಟ ಅವಕಾಶವಿಲ್ಲ.
ಅಂತಹ ಸಂದರ್ಭದಲ್ಲಿ career growthಗಾಗಿ ಹೊಸ ಅವಕಾಶ ಹುಡುಕುವುದು ಸಂಪೂರ್ಣವಾಗಿ ಸಮಂಜಸ.
ಆದರೆ ಇಲ್ಲಿ ಬಳಸುವ ಪದಗಳು ಬಹಳ ಮುಖ್ಯ.
“ನನ್ನ ಕಂಪನಿಯಲ್ಲಿ promotion ಸಿಗುತ್ತಿಲ್ಲ”
ಎಂದು ಮಾತ್ರ ಹೇಳುವುದಕ್ಕಿಂತ,
“ನನ್ನ ಪ್ರಸ್ತುತ roleನಲ್ಲಿ ಸಾಕಷ್ಟು ಕಲಿತಿದ್ದೇನೆ. ಈಗ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುವ ಮತ್ತು ನನ್ನ skills ಅನ್ನು ಮುಂದಿನ ಹಂತಕ್ಕೆ ಬಳಸಿಕೊಳ್ಳುವ ಅವಕಾಶವನ್ನು ಹುಡುಕುತ್ತಿದ್ದೇನೆ.”
ಎಂದು ಹೇಳುವುದು ಹೆಚ್ಚು professional.
💡 ಏಕೆ ಇದು ಒಳ್ಳೆಯ ಉತ್ತರ?
ಈ ರೀತಿಯ ಉತ್ತರದಿಂದ ನೀವು:
🔹 Ambitious ಎಂದು ತೋರಿಸುತ್ತೀರಿ
🔹 Learning mindset ಹೊಂದಿದ್ದೀರಿ ಎಂಬುದು ತಿಳಿಯುತ್ತದೆ
🔹 ಹೆಚ್ಚಿನ responsibility ತೆಗೆದುಕೊಳ್ಳಲು ಸಿದ್ಧರಾಗಿದ್ದೀರಿ ಎಂದು ತೋರಿಸುತ್ತದೆ
🔹 Career ಬಗ್ಗೆ serious ಆಗಿದ್ದೀರಿ ಎಂಬ impression ಮೂಡುತ್ತದೆ
🔹 ಹಿಂದಿನ employer ಬಗ್ಗೆ ಯಾವುದೇ negative statement ಮಾಡುವುದಿಲ್ಲ
🗣️ Interviewನಲ್ಲಿ ಈ ರೀತಿ ಹೇಳಬಹುದು
“ನನ್ನ ಪ್ರಸ್ತುತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ನನ್ನ roleಗೆ ಸಂಬಂಧಿಸಿದಂತೆ ಸಾಕಷ್ಟು ಅನುಭವ ಮತ್ತು ಕೌಶಲ್ಯಗಳನ್ನು ಗಳಿಸಿದ್ದೇನೆ. ಈಗ ನನ್ನ careerನ ಮುಂದಿನ ಹಂತಕ್ಕೆ ಹೋಗಲು, ಹೆಚ್ಚಿನ ಜವಾಬ್ದಾರಿ ಮತ್ತು ಹೊಸ challenges ಇರುವ role ಅನ್ನು ಹುಡುಕುತ್ತಿದ್ದೇನೆ. ಈ position ನನ್ನ skills ಮತ್ತು future career goalsಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ ಎಂದು ನನಗೆ ಅನಿಸುತ್ತಿದೆ.”
ಇದು ಒಂದು generic answer ಅಲ್ಲ.
ನಿಮ್ಮ actual experienceಗೆ ಅನುಗುಣವಾಗಿ ಇದನ್ನು ಬದಲಾಯಿಸಬಹುದು.
ಉದಾಹರಣೆಗೆ ನೀವು accountingನಲ್ಲಿ ಕೆಲಸ ಮಾಡುತ್ತಿದ್ದರೆ:
“ನಾನು accounting ಮತ್ತು day-to-day financial operationsನಲ್ಲಿ ಉತ್ತಮ ಅನುಭವ ಪಡೆದಿದ್ದೇನೆ. ಈಗ ಇನ್ನಷ್ಟು advanced responsibilities ಹೊಂದಿರುವ roleನಲ್ಲಿ ಕೆಲಸ ಮಾಡಿ ನನ್ನ accounting knowledge ಅನ್ನು ವಿಸ್ತರಿಸಲು ಬಯಸುತ್ತೇನೆ.”
ಎಂದು ಹೇಳಬಹುದು.
🏠 ಉತ್ತಮ ಕಾರಣ 2: ವೈಯಕ್ತಿಕ ಜೀವನದಲ್ಲಿನ ಪ್ರಮುಖ ಬದಲಾವಣೆ
ಎಲ್ಲಾ job changesಗೂ office-related ಕಾರಣ ಇರಬೇಕೆಂದಿಲ್ಲ.
ಕೆಲವೊಮ್ಮೆ ಜೀವನದಲ್ಲಿ ನಡೆಯುವ ಬದಲಾವಣೆಗಳು career decision ಮೇಲೆ ಪರಿಣಾಮ ಬೀರುತ್ತವೆ.
ಉದಾಹರಣೆಗೆ:
📍 ಬೇರೆ ನಗರಕ್ಕೆ shift ಆಗುವುದು
📍 ಕುಟುಂಬದ ಪರಿಸ್ಥಿತಿಯಲ್ಲಿ ಬದಲಾವಣೆ
📍 commute ಸಮಸ್ಯೆ
📍 work-life balance ಅಗತ್ಯ
📍 relocation
📍 ಕುಟುಂಬದ ಜವಾಬ್ದಾರಿಗಳ ಬದಲಾವಣೆ
ಇಂತಹ ಕಾರಣಗಳು ನಿಜವಾಗಿಯೂ ಉದ್ಯೋಗ ಬದಲಾವಣೆಗೆ ಕಾರಣವಾಗಬಹುದು.
ಇದರಲ್ಲಿ ಯಾವುದೇ ತಪ್ಪಿಲ್ಲ.
ಆದರೆ ಒಂದು ವಿಷಯ ಗಮನದಲ್ಲಿರಲಿ:
ಅಗತ್ಯಕ್ಕಿಂತ ಹೆಚ್ಚು ವೈಯಕ್ತಿಕ ವಿವರಗಳನ್ನು interviewerಗೆ ಹೇಳಬೇಕಾಗಿಲ್ಲ.
ನಿಮ್ಮ ವೈಯಕ್ತಿಕ ಜೀವನದ ಸಂಪೂರ್ಣ ಕಥೆಯನ್ನು ಹೇಳುವ ಅಗತ್ಯವಿಲ್ಲ.
ಸಂಕ್ಷಿಪ್ತವಾಗಿ, ಪ್ರಾಮಾಣಿಕವಾಗಿ ಮತ್ತು professional ಆಗಿ ಹೇಳಿದರೆ ಸಾಕು.
🗣️ ಉದಾಹರಣೆಗೆ
“ನನ್ನ ವೈಯಕ್ತಿಕ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳಾಗಿರುವುದರಿಂದ ಈಗ ನನ್ನ ಸ್ಥಳಕ್ಕೆ ಹೆಚ್ಚು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿದ್ದೇನೆ. ಅದೇ ಸಮಯದಲ್ಲಿ ನನ್ನ career growth ಮುಂದುವರಿಯುವಂತಹ role ಅನ್ನು ಆಯ್ಕೆ ಮಾಡಲು ಬಯಸುತ್ತೇನೆ.”
ಇದು ಸಾಕಷ್ಟು professional.
⚖️ Work-Life Balance ಕಾರಣ ಹೇಳಬಹುದಾ?
ಹೌದು.
ಆದರೆ ಇದನ್ನು ಹೇಳುವ ರೀತಿಯೇ ಮುಖ್ಯ.
ತಪ್ಪಾದ ವಿಧಾನ:
“ನನ್ನ current company ತುಂಬಾ ಕೆಲಸ ಮಾಡಿಸುತ್ತದೆ. ನನಗೆ ಅಲ್ಲಿ ಕೆಲಸ ಮಾಡಲು ಇಷ್ಟವಿಲ್ಲ.”
ಉತ್ತಮ ವಿಧಾನ:
“ನನ್ನ career growth ಜೊತೆಗೆ ದೀರ್ಘಕಾಲ sustainable ಆಗಿರುವ work environment ಅನ್ನು ಹುಡುಕುತ್ತಿದ್ದೇನೆ. ನನ್ನ professional responsibilities ಮತ್ತು personal commitments ಎರಡನ್ನೂ ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವ role ನನ್ನ career goalsಗೆ ಹೆಚ್ಚು ಸೂಕ್ತವಾಗಿರುತ್ತದೆ.”
ಎಂಬ ರೀತಿಯಲ್ಲಿ ಹೇಳಬಹುದು.
ಇದರಿಂದ ನೀವು ಕೆಲಸ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎಂಬ impression ಬರುವುದಿಲ್ಲ.
ಬದಲಾಗಿ ನೀವು sustainable career ಬಗ್ಗೆ ಯೋಚಿಸುತ್ತಿದ್ದೀರಿ ಎಂಬುದು ತಿಳಿಯುತ್ತದೆ.
📚 ಉತ್ತಮ ಕಾರಣ 3: ಹೊಸ Skills ಗಳನ್ನು ಕಲಿಯಲು ಮತ್ತು Professional Developmentಗೆ ಅವಕಾಶ
ಇದು ಕೂಡ ಅತ್ಯಂತ ಉತ್ತಮ career-oriented reason.
ಇಂದಿನ job marketನಲ್ಲಿ ಒಂದೇ skillset ಮೇಲೆ ವರ್ಷಗಳ ಕಾಲ ಅವಲಂಬಿಸುವುದು ಸಾಕಾಗುವುದಿಲ್ಲ.
Technology ಬದಲಾಗುತ್ತಿದೆ.
Industry processes ಬದಲಾಗುತ್ತಿವೆ.
ಹೊಸ softwareಗಳು ಬರುತ್ತಿವೆ.
Automation ಹೆಚ್ಚುತ್ತಿದೆ.
ಹೀಗಾಗಿ professionals ಕೂಡ ನಿರಂತರವಾಗಿ ತಮ್ಮ skills update ಮಾಡಿಕೊಳ್ಳಬೇಕಾಗುತ್ತದೆ.
ನೀವು ಹೊಸ certification ಮಾಡಿದ್ದರೆ, degree ಪೂರ್ಣಗೊಳಿಸಿದ್ದರೆ ಅಥವಾ ಹೊಸ technology ಕಲಿತಿದ್ದರೆ, job changeಗೆ ಅದನ್ನು ಒಂದು positive reason ಆಗಿ ಬಳಸಬಹುದು.
ಉದಾಹರಣೆಗೆ:
💻 ಹೊಸ software
📊 Data analysis
📈 Digital marketing
🤖 AI tools
🧮 Advanced accounting
☁️ Cloud technologies
📱 Digital tools
ಇತ್ಯಾದಿ.
🎯 ಈ ಕಾರಣ interviewerಗೆ ಯಾವ ಸಂದೇಶ ಕೊಡುತ್ತದೆ?
ನೀವು:
🔹 Learning mindset ಹೊಂದಿದ್ದೀರಿ
🔹 Self-improvementಗೆ ಪ್ರಾಮುಖ್ಯತೆ ನೀಡುತ್ತೀರಿ
🔹 Career stagnation ಬಯಸುವುದಿಲ್ಲ
🔹 ಹೊಸ challenges ಸ್ವೀಕರಿಸಲು ಸಿದ್ಧ
🔹 ನಿಮ್ಮ skillsನಲ್ಲಿ investment ಮಾಡುತ್ತೀರಿ
ಎಂಬ ಸಂದೇಶ ಹೋಗುತ್ತದೆ.
🗣️ Interview Answer Example ಇಲ್ಲಿದೆ;
“ನನ್ನ current roleನಲ್ಲಿ ಉತ್ತಮ ಅನುಭವ ಪಡೆದಿದ್ದೇನೆ. ಇತ್ತೀಚೆಗೆ ಕೆಲವು ಹೊಸ skills ಮತ್ತು tools ಕಲಿತಿದ್ದೇನೆ. ಈಗ ಆ skills ಅನ್ನು practical environmentನಲ್ಲಿ ಬಳಸಿಕೊಂಡು ಇನ್ನಷ್ಟು professional growth ಸಾಧಿಸಲು ಬಯಸುತ್ತೇನೆ. ಅದಕ್ಕಾಗಿ ನನ್ನ learning ಮತ್ತು career goalsಗೆ ಹೆಚ್ಚು ಹೊಂದಿಕೊಳ್ಳುವ ಅವಕಾಶವನ್ನು ಹುಡುಕುತ್ತಿದ್ದೇನೆ.”
ಇದು ವಿಶೇಷವಾಗಿ career transition ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಹ ಉಪಯುಕ್ತ.
🏢 ಉತ್ತಮ ಕಾರಣ 4: ಈ Company ಅಥವಾ Roleನಲ್ಲಿ ತುಂಬಾ ಆಸಕ್ತಿ
ಕೆಲವೊಮ್ಮೆ ಅಭ್ಯರ್ಥಿ job change ಮಾಡಲು ಬಯಸುವುದಕ್ಕೆ ಮುಖ್ಯ ಕಾರಣವೇ ಹೊಸ company.
ನೀವು ಬಹಳ ದಿನಗಳಿಂದ ಒಂದು ನಿರ್ದಿಷ್ಟ companyಯನ್ನು ಗಮನಿಸುತ್ತಿರಬಹುದು.
ಅದರ work culture ಇಷ್ಟವಾಗಿರಬಹುದು.
ಅದರ projects ನಿಮಗೆ ಆಸಕ್ತಿದಾಯಕವಾಗಿರಬಹುದು.
ಅಲ್ಲಿ ನಿಮ್ಮ skillset ಅನ್ನು ಉತ್ತಮವಾಗಿ ಬಳಸಿಕೊಳ್ಳಬಹುದು ಎಂದು ಅನಿಸಿರಬಹುದು.
ಅಂತಹ ಸಂದರ್ಭದಲ್ಲಿ ಅದನ್ನು ಹೇಳಲು ಹಿಂಜರಿಯಬೇಕಾಗಿಲ್ಲ.
ಆದರೆ ಕೇವಲ:
“ನಿಮ್ಮ company ತುಂಬಾ famous.”
ಎಂದು ಹೇಳುವುದು ಸಾಕಾಗುವುದಿಲ್ಲ.
ನೀವು ಏಕೆ ಆ company? ಏಕೆ ಆ role? ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು.
💬 ಒಳ್ಳೆಯ ಉತ್ತರ ಹೇಗಿರಬಹುದು?
“ನಿಮ್ಮ ಸಂಸ್ಥೆಯ ಈ ಕ್ಷೇತ್ರದಲ್ಲಿನ ಕೆಲಸವನ್ನು ನಾನು ಕೆಲವು ಸಮಯದಿಂದ ಗಮನಿಸುತ್ತಿದ್ದೇನೆ. ವಿಶೇಷವಾಗಿ ಈ roleನಲ್ಲಿ ನನ್ನ ಹಿಂದಿನ ಅನುಭವ ಮತ್ತು skills ಅನ್ನು ಬಳಸಿಕೊಳ್ಳುವುದರ ಜೊತೆಗೆ ಹೊಸದನ್ನು ಕಲಿಯುವ ಅವಕಾಶವಿದೆ ಎಂದು ನನಗೆ ಅನಿಸುತ್ತದೆ. ಆದ್ದರಿಂದ ಈ position ನನ್ನ career directionಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ ಎಂದು ಭಾವಿಸಿ ಅರ್ಜಿ ಸಲ್ಲಿಸಿದ್ದೇನೆ.”
ಇಂತಹ ಉತ್ತರ interviewerಗೆ ನೀವು random ಆಗಿ application ಹಾಕಿಲ್ಲ ಎಂಬುದನ್ನು ತೋರಿಸುತ್ತದೆ.
🎯 ಒಂದು ಪ್ರಮುಖ ನಿಯಮ: “ನಾನು ಯಾವುದರಿಂದ ಓಡುತ್ತಿದ್ದೇನೆ?”ಅನ್ನೋದಕ್ಕಿಂತ “ನಾನು ಎಲ್ಲಿಗೆ ಹೋಗುತ್ತಿದ್ದೇನೆ?” ಅನ್ನೋದು ಮುಖ್ಯ
Job change answerನಲ್ಲಿ ಈ ಒಂದು principle ನೆನಪಿಟ್ಟುಕೊಳ್ಳಿ.
Negative focus:
“ನನ್ನ current companyಯಲ್ಲಿ ಇದು ಚೆನ್ನಾಗಿಲ್ಲ.”
Positive focus:
“ನನ್ನ ಮುಂದಿನ career ಹಂತದಲ್ಲಿ ಇದನ್ನು ಸಾಧಿಸಲು ಬಯಸುತ್ತೇನೆ.”
ಉದಾಹರಣೆಗೆ:
❌ “ನನ್ನ manager ನನ್ನನ್ನು ಗೌರವಿಸುವುದಿಲ್ಲ.”
✅ “ಹೆಚ್ಚಿನ responsibility ಮತ್ತು professional collaboration ಇರುವ environmentನಲ್ಲಿ ಕೆಲಸ ಮಾಡಲು ಬಯಸುತ್ತೇನೆ.”
❌ “ನನ್ನ companyಯಲ್ಲಿ salary ಕಡಿಮೆ.”
✅ “ನನ್ನ experience, responsibilities ಮತ್ತು market expectationsಗೆ ಹೊಂದಿಕೆಯಾಗುವ role ಅನ್ನು ಹುಡುಕುತ್ತಿದ್ದೇನೆ.”
❌ “ಅಲ್ಲಿ growth ಇಲ್ಲ.”
✅ “ನನ್ನ careerನ ಮುಂದಿನ ಹಂತಕ್ಕೆ ಹೆಚ್ಚಿನ learning ಮತ್ತು advancement ಇರುವ ಅವಕಾಶವನ್ನು ಹುಡುಕುತ್ತಿದ್ದೇನೆ.”
ಇದು framingನ ಶಕ್ತಿ.
🚫 ಈಗ ನೋಡೋಣ: ತಪ್ಪಿಸಬೇಕಾದ 5 ಪ್ರಮುಖ ಕಾರಣಗಳು
ಉದ್ಯೋಗ ಬದಲಾವಣೆಗೆ ನಿಮ್ಮ ಬಳಿ ನಿಜವಾದ ಕಾರಣವಿದ್ದರೂ ಅದನ್ನು ಹೇಗೆ ಹೇಳುತ್ತೀರಿ ಎಂಬುದು ಮುಖ್ಯ.
ಕೆಲವು ಉತ್ತರಗಳು interviewerನಲ್ಲಿ ತಕ್ಷಣ negative impression ಮೂಡಿಸಬಹುದು.
❌ ಕಾರಣ 1: “ನನ್ನ Boss ಒಳ್ಳೆಯ ವ್ಯಕ್ತಿ ಅಲ್ಲ”
ನಿಮ್ಮ managerನೊಂದಿಗೆ ನಿಜವಾಗಿಯೂ ಸಮಸ್ಯೆ ಇರಬಹುದು.
ಅವರು ನಿಮ್ಮನ್ನು support ಮಾಡದೇ ಇರಬಹುದು.
ಅಥವಾ communication ಸಮಸ್ಯೆ ಇರಬಹುದು.
ಆದರೆ interviewನಲ್ಲಿ ಅವರನ್ನು ನೇರವಾಗಿ ಕೆಟ್ಟವರಂತೆ ಚಿತ್ರಿಸುವುದು ಉತ್ತಮವಲ್ಲ.
❌ ಹೀಗೆ ಹೇಳುವುದನ್ನು ತಪ್ಪಿಸಿ:
“ನನ್ನ bossಗೆ employees ಬಗ್ಗೆ respect ಇಲ್ಲ. ಅವರ ಜೊತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ.”
ಇದರಿಂದ interviewer ನಿಮ್ಮ professionalism ಬಗ್ಗೆ ಪ್ರಶ್ನೆ ಮಾಡಬಹುದು.
✅ ಇದರ ಬದಲಾಗಿ:
“ನಾನು ಮುಂದಿನ ಹಂತದಲ್ಲಿ ಉತ್ತಮ communication ಮತ್ತು collaborative working environment ಇರುವ role ಅನ್ನು ಹುಡುಕುತ್ತಿದ್ದೇನೆ.”
ಎಂದು ಹೇಳಬಹುದು.
❌ ಕಾರಣ 2: “ಸಂಬಳ ಕಡಿಮೆ, ಆದ್ದರಿಂದ job ಬಿಡುತ್ತಿದ್ದೇನೆ”
Salary ಒಂದು legitimate factor.
ಯಾರೂ ಅದನ್ನು ತಪ್ಪು ಎಂದು ಹೇಳುವುದಿಲ್ಲ.
ಆದರೆ salary ಒಂದನ್ನೇ job changeಗೆ ಏಕೈಕ ಕಾರಣವಾಗಿ ಹೇಳುವುದು ಉತ್ತಮ strategy ಅಲ್ಲ.
ಉದಾಹರಣೆಗೆ:
“ನನಗೆ ಹೆಚ್ಚು salary ಬೇಕು. ಬೇರೆ company ಹೆಚ್ಚು ಹಣ ಕೊಡುತ್ತಿದೆ.”
ಎಂದರೆ interviewerಗೆ ನೀವು salaryಗಾಗಿ ಮಾತ್ರ company ಬದಲಾಯಿಸುತ್ತೀರಿ ಎಂಬ impression ಬರಬಹುದು.
ನಾಳೆ ಇನ್ನೊಂದು company ಸ್ವಲ್ಪ ಹೆಚ್ಚು salary offer ಮಾಡಿದರೆ ಅಲ್ಲಿಗೂ ಹೋಗಬಹುದು ಎಂಬ ಅನುಮಾನ ಮೂಡಬಹುದು.
✅ ಸರಿಯಾದ ಹಾಗು ಉತ್ತಮ framing:
“ನನ್ನ ಅನುಭವ ಮತ್ತು responsibilitiesಗೆ ಹೊಂದಿಕೆಯಾಗುವ career opportunity ಹುಡುಕುತ್ತಿದ್ದೇನೆ. ಜೊತೆಗೆ role, learning opportunities ಮತ್ತು overall compensation ಕೂಡ ನನ್ನ career expectationsಗೆ ಹೊಂದಿಕೆಯಾಗಬೇಕು ಎಂದು ಬಯಸುತ್ತೇನೆ.”
ಇಲ್ಲಿ salary ವಿಷಯವನ್ನು ಸಂಪೂರ್ಣವಾಗಿ ಮರೆಮಾಡಿಲ್ಲ.
ಆದರೆ ಅದನ್ನು ಒಂದೇ ಕಾರಣ ಮಾಡಿಲ್ಲ.
👉 Interview ಗೆ ಹೋಗುವ ಮೊದಲು powerful Resume ತಯಾರಿಸಬೇಕಾ? ನಮ್ಮ detailed Resume Guide ತಪ್ಪದೇ ಓದಿ.
❌ ಕಾರಣ 3: “ನನಗೆ ಆ ಕೆಲಸವೇ ಇಷ್ಟವಿಲ್ಲ”
ಈ ರೀತಿಯ ಉತ್ತರವನ್ನು ಸಾಧ್ಯವಾದಷ್ಟು ತಪ್ಪಿಸಿ.
ಉದಾಹರಣೆಗೆ:
“ನನಗೆ officeಗೆ ಹೋಗುವುದೇ ಇಷ್ಟವಿಲ್ಲ.”
“ಈ ಕೆಲಸ ತುಂಬಾ boring.”
“ನಾನು ಈ ಕೆಲಸದಿಂದ ಬೇಸತ್ತಿದ್ದೇನೆ.”
ಇವು ನಿಮ್ಮ motivation ಬಗ್ಗೆ negative impression ನೀಡಬಹುದು.
ಒಂದು role ನಿಮಗೆ suit ಆಗದಿದ್ದರೂ, ಅದನ್ನು professional languageನಲ್ಲಿ explain ಮಾಡಬಹುದು.
✅ ಉದಾಹರಣೆಗೆ:
“ನನ್ನ ಪ್ರಸ್ತುತ roleನಲ್ಲಿ ಉತ್ತಮ ಅನುಭವ ಪಡೆದಿದ್ದೇನೆ. ಆದರೆ ನನ್ನ long-term career goals ಹೆಚ್ಚು analytical/technical/managerial responsibilities ಇರುವ roleಗೆ ಹೊಂದಿಕೆಯಾಗುತ್ತವೆ ಎಂದು ಈಗ ಸ್ಪಷ್ಟವಾಗಿದೆ.”
ಇದು maturity ತೋರಿಸುತ್ತದೆ.
❌ ಕಾರಣ 4: ತೀರಾ ವೈಯಕ್ತಿಕ ವಿಷಯಗಳನ್ನು ವಿವರಿಸುವುದು
Interview ಒಂದು professional conversation.
ನಿಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು detail ಅನ್ನು interviewerಗೆ ಹೇಳಬೇಕಾಗಿಲ್ಲ.
ಉದಾಹರಣೆಗೆ family disputes, personal arguments ಅಥವಾ private issues ಬಗ್ಗೆ ದೀರ್ಘವಾಗಿ ವಿವರಿಸುವ ಅಗತ್ಯವಿಲ್ಲ.
❌ ಇದನ್ನು ತಪ್ಪಿಸಿ:
“ಮನೆಯಲ್ಲಿ ಹೀಗೆ ಆಯಿತು, ನಂತರ ಅವರು ಹೀಗೆ ಹೇಳಿದರು, ಆಮೇಲೆ ನಾನು…”
ಇದು interviewನ focus ಅನ್ನು ಬದಲಾಯಿಸಬಹುದು.
✅ ಸರಿಯಾದ ವಿಧಾನ:
“ನನ್ನ ವೈಯಕ್ತಿಕ ಪರಿಸ್ಥಿತಿಯಲ್ಲಿ ಕೆಲವು ಬದಲಾವಣೆಗಳಾಗಿದ್ದು, ಈಗ ನನ್ನ current location ಮತ್ತು personal commitmentsಗೆ ಹೊಂದಿಕೊಳ್ಳುವ job opportunity ಹುಡುಕುತ್ತಿದ್ದೇನೆ.”
ಸಾಕು.
❌ ಕಾರಣ 5: ಸುಳ್ಳು ಅಥವಾ ಅತಿಯಾಗಿ ಅಭ್ಯಾಸ ಮಾಡಿದ ಉತ್ತರ
ಇದು ಬಹಳ ಮುಖ್ಯ.
Interviewನಲ್ಲಿ ಎಲ್ಲರೂ “perfect answer” ಹುಡುಕುತ್ತಾರೆ.
ಆದರೆ interviewer ಸಾಮಾನ್ಯವಾಗಿ prepared answers ಮತ್ತು genuine answers ನಡುವಿನ ವ್ಯತ್ಯಾಸವನ್ನು ಗಮನಿಸಬಹುದು.
ನೀವು internetನಲ್ಲಿ ಕಂಡ ಒಂದು answer ಅನ್ನು ಪದೇಪದೇ practice ಮಾಡಿ, ಅದನ್ನೇ robotನಂತೆ ಹೇಳಿದರೆ artificial ಆಗಿ ಕಾಣಬಹುದು.
ಉದಾಹರಣೆಗೆ:
“I am seeking an opportunity to leverage my synergistic capabilities in a dynamic and growth-oriented organization…”
ಎಂಬ corporate English sentenceಗಳನ್ನು ಅರ್ಥವಿಲ್ಲದೆ ಹೇಳುವುದರಿಂದ ಪ್ರಯೋಜನವಿಲ್ಲ.
ಸರಳವಾಗಿ, ನಿಮ್ಮದೇ ಭಾಷೆಯಲ್ಲಿ ಹೇಳಿ.
“ನನ್ನ current roleನಲ್ಲಿ ಸಾಕಷ್ಟು ಕಲಿತಿದ್ದೇನೆ. ಈಗ ಇನ್ನಷ್ಟು responsibility ಇರುವ positionನಲ್ಲಿ ನನ್ನ skills ಬಳಸಿಕೊಂಡು grow ಆಗಲು ಬಯಸುತ್ತೇನೆ.”
ಇದು ಹೆಚ್ಚು natural.
🧠 ನಿಮ್ಮ ಉತ್ತರವನ್ನು Ready ಮಾಡಲು 4 ಪ್ರಮುಖ ಪ್ರಶ್ನೆಗಳು
Interviewಗೆ ಹೋಗುವ ಮೊದಲು ಈ ನಾಲ್ಕು ಪ್ರಶ್ನೆಗಳಿಗೆ ನಿಮ್ಮದೇ ಉತ್ತರ ಸಿದ್ಧಪಡಿಸಿಕೊಳ್ಳಿ.
1️⃣ ನಾನು ಈಗಿನ jobನಲ್ಲಿ ಏನು ಕಲಿತಿದ್ದೇನೆ?
ನಿಮ್ಮ skills ಮತ್ತು experience ಬಗ್ಗೆ ಯೋಚಿಸಿ.
2️⃣ ನಾನು ಏಕೆ change ಬಯಸುತ್ತಿದ್ದೇನೆ?
ನಿಜವಾದ ಕಾರಣವನ್ನು ಗುರುತಿಸಿ.
3️⃣ ಹೊಸ jobನಲ್ಲಿ ನಾನು ಏನು ಪಡೆಯಲು ಬಯಸುತ್ತೇನೆ?
Growth? Skills? Responsibility? Location? Industry change?
4️⃣ ಈ company ನನಗೆ ಏಕೆ ಸೂಕ್ತ?
Company ಮತ್ತು role ಬಗ್ಗೆ ಕನಿಷ್ಠ basic research ಮಾಡಿ.
ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಸಿದ್ಧವಾಗಿದ್ದರೆ “Why are you leaving your job?” ಎಂಬ ಪ್ರಶ್ನೆಗೆ ಉತ್ತರಿಸುವುದು ಸುಲಭವಾಗುತ್ತದೆ.
💬 Ready-to-use Sample ಉತ್ತರ
ಒಂದು general professional answer ಹೀಗಿರಬಹುದು:
“ನನ್ನ ಪ್ರಸ್ತುತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ನಾನು ಸಾಕಷ್ಟು ಅನುಭವ ಮತ್ತು practical skills ಗಳಿಸಿದ್ದೇನೆ. ಈಗ ನನ್ನ careerನ ಮುಂದಿನ ಹಂತಕ್ಕೆ ಹೋಗಲು ಬಯಸುತ್ತೇನೆ. ಹೆಚ್ಚಿನ ಜವಾಬ್ದಾರಿ, ಹೊಸ challenges ಮತ್ತು ನನ್ನ skills ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳುವ ಅವಕಾಶ ಇರುವ role ಅನ್ನು ಹುಡುಕುತ್ತಿದ್ದೇನೆ. ಈ position ನನ್ನ ಹಿಂದಿನ ಅನುಭವ ಮತ್ತು ಮುಂದಿನ career goalsಗೆ ಉತ್ತಮವಾಗಿ ಹೊಂದಿಕೆಯಾಗುತ್ತದೆ ಎಂದು ನನಗೆ ಅನಿಸುತ್ತಿದೆ. ಅದಕ್ಕಾಗಿ ಈ ಅವಕಾಶದ ಬಗ್ಗೆ ನಾನು ಆಸಕ್ತಿ ಹೊಂದಿದ್ದೇನೆ.”
ಇದನ್ನು ನಿಮ್ಮ actual situationಗೆ ಅನುಗುಣವಾಗಿ ಬದಲಾಯಿಸಬಹುದು.
👨💼 Fresher ಆಗಿದ್ದರೆ ಏನನ್ನು ಹೇಳಬೇಕು?
Fresherಗಳಿಗೆ ಈ ಪ್ರಶ್ನೆ ಸ್ವಲ್ಪ ಬೇರೆ ರೀತಿಯಲ್ಲಿ ಬರಬಹುದು.
“Why are you looking for a job?”
ಅಥವಾ
“Why do you want to join our company?”
ಎಂದು ಕೇಳಬಹುದು.
Fresher ಆಗಿದ್ದರೆ previous job change ಬಗ್ಗೆ ಹೇಳುವ ಅಗತ್ಯವಿಲ್ಲ.
ಬದಲಾಗಿ:
“ನನ್ನ ಶಿಕ್ಷಣದ ಸಮಯದಲ್ಲಿ ಪಡೆದ knowledge ಅನ್ನು practical environmentನಲ್ಲಿ ಬಳಸಿಕೊಳ್ಳಲು ಬಯಸುತ್ತೇನೆ. ಈ role ನನಗೆ relevant skills develop ಮಾಡಿಕೊಳ್ಳಲು ಮತ್ತು experienced professionals ಜೊತೆ ಕೆಲಸ ಮಾಡಿ ಕಲಿಯಲು ಉತ್ತಮ ಅವಕಾಶ ನೀಡುತ್ತದೆ ಎಂದು ಭಾವಿಸಿದ್ದೇನೆ.”
ಎಂದು ಹೇಳಬಹುದು.
🔄 Career ಬದಲಾವಣೆ ಮಾಡುತ್ತಿದ್ದರೆ?
ನೀವು ಒಂದು fieldನಲ್ಲಿ ಕೆಲಸ ಮಾಡಿ ಮತ್ತೊಂದು fieldಗೆ shift ಆಗುತ್ತಿದ್ದರೆ, interviewer ಖಂಡಿತವಾಗಿಯೂ ಕಾರಣ ಕೇಳಬಹುದು.
ಉದಾಹರಣೆಗೆ Accountingನಿಂದ Digital Marketingಗೆ ಹೋಗುತ್ತಿದ್ದೀರಿ ಎಂದರೆ:
“ನನ್ನ ಹಿಂದಿನ ಕ್ಷೇತ್ರದಲ್ಲಿ ನನಗೆ ಉತ್ತಮ practical experience ದೊರೆತಿದೆ. ಆದರೆ ಸಮಯದೊಂದಿಗೆ digital marketing ಕ್ಷೇತ್ರದಲ್ಲಿ ನನ್ನ ಆಸಕ್ತಿ ಹೆಚ್ಚಾಯಿತು. ಅದಕ್ಕಾಗಿ ನಾನು ಸಂಬಂಧಿತ skills ಮತ್ತು knowledge ಅಭಿವೃದ್ಧಿಪಡಿಸಿಕೊಂಡಿದ್ದೇನೆ. ಈಗ ಆ skills ಅನ್ನು professional environmentನಲ್ಲಿ ಬಳಸಿಕೊಂಡು ಹೊಸ career pathನಲ್ಲಿ ಬೆಳೆಯಲು ಬಯಸುತ್ತೇನೆ.”
ಎಂಬ ಉತ್ತರ ಹೆಚ್ಚು convincing.
📈 Promotion ಸಿಗದಿದ್ದರೆ ಯಾವ ರೀತಿ ಹೇಳಬೇಕು?
Promotion ಸಿಗದಿರುವುದು ನಿಜವಾದ ಕಾರಣವಾಗಿದ್ದರೂ, ಅದನ್ನು complaint ಆಗಿ ಹೇಳಬೇಡಿ.
❌ “ನನಗೆ promotion ಕೊಡಲಿಲ್ಲ, ಆದ್ದರಿಂದ job ಬಿಡುತ್ತಿದ್ದೇನೆ.”
ಬದಲಾಗಿ:
✅ “ನನ್ನ ಪ್ರಸ್ತುತ roleನಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ಈಗ ಹೆಚ್ಚಿನ responsibility ಮತ್ತು career advancementಗೆ ಅವಕಾಶವಿರುವ position ಅನ್ನು ಹುಡುಕುತ್ತಿದ್ದೇನೆ.”
ಎಂದು ಹೇಳಬಹುದು.
ಇದು ಅದೇ ವಿಷಯವನ್ನು ಹೆಚ್ಚು professional ರೀತಿಯಲ್ಲಿ ಹೇಳುತ್ತದೆ.
🌟 Interviewನಲ್ಲಿ ನಿಮ್ಮ ಉತ್ತರವನ್ನು memorable ಆಗಿ ಮಾಡುವುದು ಹೇಗೆ?
ನಿಮ್ಮ ಉತ್ತರ ಕೇವಲ “growth” ಎಂಬ ಒಂದು ಪದದ ಮೇಲೆ ನಿಲ್ಲಬಾರದು.
ಸ್ವಲ್ಪ specific ಆಗಿರಿ.
ಉದಾಹರಣೆಗೆ:
“ನನಗೆ growth ಬೇಕು”
ಎನ್ನುವುದಕ್ಕಿಂತ:
“ಮುಂದಿನ ಹಂತದಲ್ಲಿ client handling, reporting ಮತ್ತು team coordinationಗೆ ಸಂಬಂಧಿಸಿದ ಹೆಚ್ಚಿನ responsibilities ತೆಗೆದುಕೊಳ್ಳಲು ಬಯಸುತ್ತೇನೆ.”
ಎಂದು ಹೇಳಿದರೆ interviewerಗೆ ನಿಮ್ಮ career goal ಸ್ಪಷ್ಟವಾಗುತ್ತದೆ.
ಅದೇ ರೀತಿ:
“ನನಗೆ ಹೊಸ skills ಕಲಿಯಬೇಕು”
ಎನ್ನುವುದಕ್ಕಿಂತ:
“ನನ್ನ ಪ್ರಸ್ತುತ roleನಲ್ಲಿ basic accounting processesನಲ್ಲಿ ಅನುಭವ ಪಡೆದಿದ್ದೇನೆ. ಈಗ advanced reporting ಮತ್ತು financial analysisನಲ್ಲಿ ಇನ್ನಷ್ಟು exposure ಪಡೆಯಲು ಬಯಸುತ್ತೇನೆ.”
ಎಂದು ಹೇಳಿದರೆ ಉತ್ತರ ಹೆಚ್ಚು credible ಆಗುತ್ತದೆ.
🛑 Negative answer ಬಂದರೆ ಏನು ಮಾಡಬಹುದು?
ಕೆಲವೊಮ್ಮೆ interviewer ಮತ್ತಷ್ಟು ಪ್ರಶ್ನೆ ಕೇಳಬಹುದು.
“ನಿಮ್ಮ current companyಯಲ್ಲಿ ಸಮಸ್ಯೆ ಏನು?”
ಅಥವಾ
“ನಿಮ್ಮ manager ಜೊತೆ ಸಮಸ್ಯೆ ಇದೆಯೇ?”
ಎಂದು ಕೇಳಬಹುದು.
ಆಗ ಮತ್ತೆ negative discussionಗೆ ಹೋಗಬೇಡಿ.
ಶಾಂತವಾಗಿ ನಿಮ್ಮ career goal ಕಡೆಗೆ conversation ತಿರುಗಿಸಿ.
“ಯಾವುದೇ ದೊಡ್ಡ ಸಮಸ್ಯೆ ಇಲ್ಲ. ನಾನು ನನ್ನ current organizationನಲ್ಲಿ ಉತ್ತಮ ಅನುಭವ ಪಡೆದಿದ್ದೇನೆ. ಆದರೆ ಈಗ ನನ್ನ careerನಲ್ಲಿ ಮುಂದಿನ ಹಂತಕ್ಕೆ ಹೋಗಲು ಮತ್ತು ಹೆಚ್ಚಿನ responsibilities ತೆಗೆದುಕೊಳ್ಳಲು ಬಯಸುತ್ತಿದ್ದೇನೆ.”
ಎಂದು ಹೇಳಬಹುದು.
📝 Interviewಗೆ ಮುನ್ನ ತುಂಬಾ ಮುಖ್ಯ ಈ checklist – ಅಗತ್ಯವಾಗಿ ನೆನಪಿಡಿ
Interview roomಗೆ ಹೋಗುವ ಮೊದಲು ನಿಮ್ಮ job-change answer ಈ checklistಗೆ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸಿ.
✅ ಉತ್ತರ ನಿಜವಾಗಿದೆಯೇ?
✅ Professional ಆಗಿದೆಯೇ?
✅ ಹಿಂದಿನ employer ಬಗ್ಗೆ negative comments ಇಲ್ಲವೇ?
✅ ನಿಮ್ಮ future career goal ಸ್ಪಷ್ಟವಾಗಿದೆಯೇ?
✅ ನೀವು apply ಮಾಡಿರುವ roleಗೆ answer connect ಆಗುತ್ತದೆಯೇ?
✅ ತುಂಬಾ ವೈಯಕ್ತಿಕ ವಿವರಗಳಿಲ್ಲವೇ?
✅ Salary ಒಂದನ್ನೇ ಕಾರಣ ಮಾಡಿಲ್ಲವೇ?
✅ ಉತ್ತರ ತುಂಬಾ ಉದ್ದವಾಗಿಲ್ಲವೇ?
✅ Natural ಆಗಿ ಹೇಳಲು ಸಾಧ್ಯವಾಗುತ್ತದೆಯೇ?
ಈ ಪ್ರಶ್ನೆಗಳಿಗೆ “ಹೌದು” ಎಂದಾದರೆ ನಿಮ್ಮ ಉತ್ತರ ಉತ್ತಮವಾಗುವ ಸಾಧ್ಯತೆ ಹೆಚ್ಚು.
❓ Why are you leaving your job?: ಪ್ರಶ್ನೋತ್ತರಗಳು
1. Interviewನಲ್ಲಿ “Why are you leaving your job?” ಎಂದಾಗ ಏನು ಹೇಳಬೇಕು?
Career growth, new responsibilities, skill development, relocation ಅಥವಾ role/companyನಲ್ಲಿ genuine interest ಮುಂತಾದ ನಿಜವಾದ ಮತ್ತು professional ಕಾರಣಗಳನ್ನು ಹೇಳಬಹುದು.
2. Salary ಕಡಿಮೆ ಇರುವುದನ್ನು ಕಾರಣವಾಗಿ ಹೇಳಬಹುದೇ?
ಹೇಳಬಹುದು. ಆದರೆ salaryಯನ್ನೇ ಏಕೈಕ ಕಾರಣವನ್ನಾಗಿ ಮಾಡುವುದು ಉತ್ತಮವಲ್ಲ. Role, growth ಮತ್ತು responsibilities ಜೊತೆಗೆ compensation ಬಗ್ಗೆ ಮಾತನಾಡುವುದು ಉತ್ತಮ.
3. Boss ಜೊತೆ ಸಮಸ್ಯೆ ಇದ್ದರೆ ಹೇಳಬಹುದೇ?
ನೇರವಾಗಿ bossನನ್ನು badmouth ಮಾಡುವುದು ತಪ್ಪಿಸುವುದು ಉತ್ತಮ. ಬದಲಾಗಿ collaborative ಮತ್ತು professional work environment ಬಯಸುತ್ತಿರುವುದಾಗಿ ಹೇಳಬಹುದು.
4. Work-life balance ಕಾರಣ ಹೇಳಬಹುದೇ?
ಹೌದು. ಆದರೆ ಕೆಲಸ ತಪ್ಪಿಸಿಕೊಳ್ಳುವಂತೆ ಅಲ್ಲ, sustainable career ಮತ್ತು personal responsibilities ಎರಡನ್ನೂ ಸಮತೋಲನಗೊಳಿಸಲು ಬಯಸುತ್ತಿರುವುದಾಗಿ professionalವಾಗಿ ಹೇಳಬಹುದು.
5. Promotion ಸಿಗದಿರುವುದು job changeಗೆ ಕಾರಣವಾಗಬಹುದೇ?
ಹೌದು. ಆದರೆ “promotion ಕೊಡಲಿಲ್ಲ” ಎಂದು complaint ಮಾಡುವ ಬದಲು ಹೆಚ್ಚಿನ responsibility ಮತ್ತು career advancement ಇರುವ role ಹುಡುಕುತ್ತಿರುವುದಾಗಿ ಹೇಳಿ.
6. Interviewನಲ್ಲಿ ಎಷ್ಟು ಸಮಯ ಉತ್ತರಿಸಬೇಕು?
ಸಾಮಾನ್ಯವಾಗಿ concise ಮತ್ತು clear answer ಉತ್ತಮ. ಅತಿಯಾಗಿ ವಿವರಿಸುವ ಅಗತ್ಯವಿಲ್ಲ. ನಿಮ್ಮ ಕಾರಣ, ನೀವು ಕಲಿತದ್ದು ಮತ್ತು ಮುಂದಿನ ಗುರಿ—ಈ ಮೂರು ವಿಷಯಗಳು ಸಾಕಷ್ಟು.
7. Personal reason ಇದ್ದರೆ ಸಂಪೂರ್ಣ ವಿವರ ಕೊಡಬೇಕೇ?
ಇಲ್ಲ. ಅಗತ್ಯವಿರುವಷ್ಟು ಮಾತ್ರ ಹೇಳಿ. Professional boundaries ಕಾಪಾಡಿಕೊಳ್ಳಿ.
8. Career change ಮಾಡುವಾಗ ಏನು ಹೇಳಬೇಕು?
ಹೊಸ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿ ಹೇಗೆ ಬೆಳೆದಿತು, ಯಾವ skills ಕಲಿತಿದ್ದೀರಿ ಮತ್ತು ಹೊಸ roleಗೆ ಏಕೆ transition ಆಗಲು ಬಯಸುತ್ತೀರಿ ಎಂಬುದನ್ನು ವಿವರಿಸಿ.
9. Current company ಬಗ್ಗೆ negative ಮಾತು ಹೇಳಿದರೆ ಏನಾಗಬಹುದು?
ಅದು ನಿಮ್ಮ professionalism ಬಗ್ಗೆ interviewerಗೆ ಅನುಮಾನ ಮೂಡಿಸಬಹುದು. ಆದ್ದರಿಂದ ಹಿಂದಿನ ಸಂಸ್ಥೆಯ ಬಗ್ಗೆ ಗೌರವದಿಂದ ಮಾತನಾಡಿ.
10. “ನಿಮ್ಮ current company ನಿಮಗೆ ಇಷ್ಟವಿಲ್ಲವೇ?” ಎಂದು ಕೇಳಿದರೆ?
“ನಾನು ಅಲ್ಲಿ ಉತ್ತಮ ಅನುಭವ ಪಡೆದಿದ್ದೇನೆ. ಆದರೆ ನನ್ನ long-term goalsಗೆ ಹೆಚ್ಚು ಹೊಂದಿಕೊಳ್ಳುವ ಅವಕಾಶವನ್ನು ಈಗ ಹುಡುಕುತ್ತಿದ್ದೇನೆ” ಎಂದು ಉತ್ತರಿಸಬಹುದು.
11. ಹೆಚ್ಚಿನ salaryಗಾಗಿ job change ಮಾಡುತ್ತಿದ್ದರೆ ಏನು ಹೇಳಬೇಕು?
Compensation ನಿಮ್ಮ decisionನಲ್ಲಿ ಒಂದು ಭಾಗ ಎಂದು ಹೇಳಬಹುದು. ಆದರೆ career growth, role suitability ಮತ್ತು responsibilitiesನನ್ನೂ ಸೇರಿಸಿ ವಿವರಿಸಿ.
12. ಹೊಸ company ಬಗ್ಗೆ ಏಕೆ ಆಸಕ್ತಿ ಎಂದು ಕೇಳಿದರೆ?
Companyಯ project, role, industry, learning opportunities ಅಥವಾ ನಿಮ್ಮ skillsಗೆ ಇರುವ relevance ಬಗ್ಗೆ specific ಆಗಿ ಮಾತನಾಡಿ.
13. “Are you unhappy with your current job?” ಎಂದರೆ?
“ನನ್ನ current roleನಲ್ಲಿ ಉತ್ತಮ ಅನುಭವ ಪಡೆದಿದ್ದೇನೆ. ಈಗ ನನ್ನ careerನಲ್ಲಿ ಹೊಸ challenges ಮತ್ತು responsibilities ಹುಡುಕುತ್ತಿದ್ದೇನೆ” ಎಂಬ ರೀತಿಯಲ್ಲಿ ಉತ್ತರಿಸಬಹುದು.
14. Job change ಬಗ್ಗೆ ಸುಳ್ಳು ಹೇಳಬಹುದೇ?
ಬೇಡ. Background verification ಅಥವಾ follow-up questionsನಲ್ಲಿ inconsistency ಕಾಣಿಸಿಕೊಳ್ಳಬಹುದು. ನಿಮ್ಮ ನಿಜವಾದ ಕಾರಣವನ್ನು professionalವಾಗಿ frame ಮಾಡುವುದು ಉತ್ತಮ.
15. Job change answerನಲ್ಲಿ ಅತ್ಯಂತ ಮುಖ್ಯವಾದ ವಿಷಯ ಯಾವುದು?
ನೀವು ಯಾವುದರಿಂದ ದೂರ ಹೋಗುತ್ತಿದ್ದೀರಿ ಎನ್ನುವುದಕ್ಕಿಂತ, ನೀವು ಯಾವ career directionಗೆ ಹೋಗಲು ಬಯಸುತ್ತಿದ್ದೀರಿ ಎಂಬುದನ್ನು ತೋರಿಸುವುದು ಮುಖ್ಯ.
🎯 Conclusion
“ನೀವು ನಿಮ್ಮ current job ಏತಕ್ಕಾಗಿ ಬಿಡುತ್ತಿದ್ದೀರಿ?” ಎಂಬ ಪ್ರಶ್ನೆ ಅಭ್ಯರ್ಥಿಯನ್ನು ಸಿಕ್ಕಿಹಾಕಲು ಕೇಳುವ ಪ್ರಶ್ನೆಯಲ್ಲ. ಸರಿಯಾಗಿ ಬಳಸಿಕೊಂಡರೆ ಇದು ನಿಮ್ಮ career goals, ambition ಮತ್ತು professional maturity ತೋರಿಸಲು ಸಿಗುವ ಅತ್ಯುತ್ತಮ ಅವಕಾಶ.
ನಿಮ್ಮ ಉತ್ತರದಲ್ಲಿ ಹಿಂದಿನ ಕಂಪನಿಯ ಬಗ್ಗೆ ದೂರು ನೀಡುವುದಕ್ಕಿಂತ, ನೀವು ಅಲ್ಲಿ ಏನೆಲ್ಲಾ ಕಲಿತಿದ್ದೀರಿ, ಈಗ ಏನು ಸಾಧಿಸಲು ಎದುರು ನೋಡುತ್ತಿದ್ದೀರಿ, ಮತ್ತು ಈ ಹೊಸ role ನಿಮ್ಮ careerಗೆ ಯಾವ ರೀತಿ ಹೊಂದಿಕೆಯಾಗುತ್ತದೆ ಎಂಬುದನ್ನು ವಿವರಿಸಿ.
ನಿಮ್ಮ ಕಾರಣ ನೈಜವಾಗಿರಲಿ.
ನಿಮ್ಮ ಮಾತು ತುಂಬಾ ಸರಳವಾಗಿರಲಿ.
ನಿಮ್ಮ ಉತ್ತರ positive ಆಗಿರಲಿ.
ಮತ್ತು ಪ್ರಮುಖವಾಗಿ, ಯಾರೋ internetನಲ್ಲಿ ಬರೆದ perfect answer ಅನ್ನು ನೆನಪಿಟ್ಟುಕೊಂಡು ಹೇಳುವುದಕ್ಕಿಂತ, ನಿಮ್ಮ ನಿಜವಾದ career storyಯನ್ನು professional ರೀತಿಯಲ್ಲಿ ಹೇಳಿದರೆ ಒಳ್ಳೆಯ impression ಬರುತ್ತೆ.
Interviewನಲ್ಲಿ ನೀವು ಹಿಂದಿನ ಉದ್ಯೋಗದಿಂದ ಓಡುತ್ತಿರುವ ವ್ಯಕ್ತಿಯಂತೆ ಕಾಣಬಾರದು.
ಮುಂದಿನ ಅವಕಾಶಕ್ಕಾಗಿ ಸರಿಯಾದ ಯೋಜನೆ ಮಾಡಿಕೊಂಡು ಮುಂದೆ ಸಾಗುತ್ತಿರುವ professional ಆಗಿ ಕಾಣಬೇಕು.
ಅದೇ ಈ ಪ್ರಶ್ನೆಗೆ ಉತ್ತಮ ಉತ್ತರ ಕೊಡುವ ಮೂಲ ರಹಸ್ಯ.
👉 ಇತ್ತೀಚಿನ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ ನಮ್ಮ “Jobs” ವಿಭಾಗವನ್ನು ತಪ್ಪದೇ ಓದಿ.
✍️ ಲೇಖಕರ ಬಗ್ಗೆ
ಚಿದಾನಂದ ಅವರು Dinabelaku News ವೆಬ್ಸೈಟ್ನ ವಿಷಯ ರಚನೆಕಾರರಾಗಿದ್ದು, ಓದುಗರಿಗೆ ನವೀನ ಸರ್ಕಾರಿ ಉದ್ಯೋಗ ಮಾಹಿತಿ, ಶಿಕ್ಷಣ, ಹಾಗೂ ಉಪಯುಕ್ತ ಸುದ್ದಿಗಳನ್ನು ಕನ್ನಡದಲ್ಲಿ ಸರಳವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.
ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸುವುದು ಇವರ ಮುಖ್ಯ ಉದ್ದೇಶವಾಗಿದ್ದು, ಓದುಗರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಅವರ ಭವಿಷ್ಯವನ್ನು ಬೆಳಗಿಸುವ ಕನಸನ್ನು ಹೊಂದಿದ್ದಾರೆ.
📢 Dinabelaku News – ನಿಮ್ಮ ವಿಶ್ವಾಸದ ಮಾಹಿತಿ ಮೂಲ
12 thoughts on “Why are you leaving your job? Interviewನಲ್ಲಿ ಹೇಳಬಹುದಾದ 4 ಉತ್ತಮ ಕಾರಣಗಳು, ತಪ್ಪಿಸಬೇಕಾದ 5 ಉತ್ತರಗಳು”